ಈ ಬಿಸಿಲ ತಾಪದಲಿ Productive ಮತ್ತು ಆರೋಗ್ಯಯುತವಾಗಿ ಇರೋದ್ಹೇಗೆ?

ಈ ಬಿಸಿಲ ತಾಪದಲಿ Productive ಮತ್ತು ಆರೋಗ್ಯಯುತವಾಗಿ ಇರೋದ್ಹೇಗೆ?

Productive

1. ಬೆಳಿಗ್ಗೆ ಬೇಗ (6 ಗಂಟೆ) ಎದ್ದು, 2 ಗಂಟೆ ಓದಿ. ನಂತರವೇ ಮುಂದಿನ ಕೆಲಸಗಳಿಗೆ ಹೊರಡಿ.
2. ಮಧ್ಯಾಹ್ನ 1 ರ ಒಳಗಾಗಿ ಇನ್ನೆರಡು ಗಂಟೆ ಓದಿಬಿಡಿ.
3. ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ Rest ಮಾಡಬಹುದು.
4. ಸಂಜೆ 5 ರಿಂದ 6 ರ ನಡುವೆ 🚶 Walk ಕಡ್ಡಾಯ
5. 6 ರಿಂದ 8
6. 9 ರಿಂದ 11
ಹೀಗೆ ಒಟ್ಟು2 ಗಂಟೆಗಳ 4 round ಅಂದ್ರೆ ಒಟ್ಟು 8 ಗಂಟೆ ಓದಬಹುದು.

Health

1. ಆಗಾಗ ನೀರಿಗೆ ಸ್ವಲ್ಪ ಉಪ್ಪು ಅಥವಾ ORS ಪುಡಿ ಸೇರಿಸಿ ಕುಡಿಯಿರಿ.
2. ಎಳೆನೀರು, ಕಲ್ಲಂಗಡಿ 🍉 ಸೇವಿಸಿ.
3. ಕೂಲ್ಡ್ರಿಂಕ್ಸ್, ಟೀ, ಕಾಫಿ ಬೇಡ 🚫 ಇವು ನಿರ್ಜಲೀಕರಣಕ್ಕೆ ದಾರಿ ಮಾಡುತ್ತವೆ.
4. ಮಡಿಕೆ ⚱ ಯಲ್ಲಿನ ನೀರು ಕುಡಿಯಿರಿ.
5. ತಲೆಗೆ ಎಣ್ಣೆ ಹಚ್ಚಿ
6. ಚೆನ್ನಾಗಿ ನಿದ್ದೆ ಮಾಡಿ
7. ಅತಿಯಾದ ಬೆವರಿಳಿಸುವ ವ್ಯಾಯಾಮ ಬೇಡ
8. ಪ್ರಾಣಾಯಾಮಗಳನ್ನು ಮಾಡಿ.
9. Organic ಬೆಲ್ಲ ಹಾಗೂ ಕರ್ಜೂರಗಳ ಸೇವನೆ ಉತ್ತಮ

ಇಷ್ಟೆಲ್ಲಾ ಪಾಲಿಸಿದ ಮೇಲೂ Productivity improve ಆಗದಿದ್ದರೆ, ಅತಿಯಾದ ಸುಸ್ತು ದಣಿವು ಕಂಡು ಬಂದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.

ಇನ್ನೆರಡು ತಿಂಗಳು ಅಷ್ಟೇ,
ಜೂನ್ ನಲ್ಲಿ ಮಳೆರಾಯ ಧೋ
ಎನ್ನಲು ಆರಂಭಿಸಿದ ತಕ್ಷಣ,
ಬಿಸಿಲಪ್ಪ ಉಧೋ ಎನ್ನುತ್ತ ಕಾಲ್ಕೀಳುತ್ತಾನೆ.

ಒಳ್ಳೆಯದಾಗಲಿ. 💐

ಕನ್ನಡ ಐಎಎಸ್ ಅಕಾಡೆಮಿ, ಬೆಳಗಾವಿ

Leave a Reply