You are our War 🐴 HORSES,

2024 ರ ಅಕ್ಟೋಬರ್ ತಿಂಗಳ ಒಂದು ದಿನ. ಅಂದು, ನಾನಿನ್ನೂ, Tiffin ಮಾಡಿರಲಿಲ್ಲ,
ನಮ್ಮ Office Admin ಬಂದು ಸರ್ ಯಾರೋ meet ಆಗಲು ಬಂದಿದ್ದಾರೆ,
ಎಂದು ಕದ ತಟ್ಟಿ ಹೇಳಿದರು.

ಆಫೀಸಿಗೆ ಹೋದ ತಕ್ಷಣ ಇದಿರಾದದ್ದು,
ಆಗತಾನೆ ಡಿಗ್ರಿ ಮುಗಿಸಿಕೊಂಡು ಬಂದಿದ್ದ, ವಿದ್ಯಾರ್ಥಿ ಮತ್ತು ಅವರ ತಂದೆಯವರು.

ಅಂದಿನಿಂದ ಒಂದು ವರ್ಷ ತರಬೇತಿ ತೆಗೆದುಕೊಂಡ ವಿದ್ಯಾರ್ಥಿ ಆಗಾಗ ಉತ್ತರಗಳನ್ನು ಬರೆಯುತ್ತಿದ್ದರು.
ಆದರೆ,

ಪದ ಜೋಡಣೆ ಮತ್ತು ವಾಕ್ಯ ರಚನೆಯ ದೋಷಗಳು ತುಂಬಿ ತುಳುಕುತ್ತಿದ್ದವು.
ಅವರ ಉತ್ತರ ಓದುವುದೊಂದು ದೊಡ್ಡ ಸವಾಲೇ ಆದಂತಾಗಿತ್ತು.

ಆದರೂ, ಛಲಬಿಡದ ಪರಿಶ್ರಮದ ಫಲ,
ಇಂದು ಅವರ ಉತ್ತರಗಳಲ್ಲಿನ ತಪ್ಪುಗಳು 90% ಕಡಿಮೆಯಾಗಿವೆ.

ಪ್ರತಿನಿತ್ಯ ಪ್ರಜಾವಾಣಿ ಓದಿದ ಬಲದಿಂದ ಶಬ್ದ ಭಂಡಾರವೂ ತುಂಬುತ್ತಿದೆ.

ಇಂತಹ ವಿದ್ಯಾರ್ಥಿಗಳು ಖಂಡಿತಾ ಯಶ ಸಾಧಿಸಿದ್ದಾರೆ, ಸಾಧಿಸುತ್ತಾರೆ.

ಹೇಗೆ, ಎರಡೂ ಕೈ ತಟ್ಟಿದರೆ ಮಾತ್ರ ಚಪ್ಪಾಳೆಯೋ,
ಹಾಗೆಯೇ,
ತರಗತಿಯಲ್ಲಿ ಹೇಳಿದ ಅಂಶಗಳನ್ನು Class ಮುಗಿದ ನಂತರ ಪಾಲಿಸಿದರೆ ಮಾತ್ರ ಗೆಲುವು.

ಏನ್ ಸರ್ ಒಂದ್ ವರ್ಷ ಕೋಚಿಂಗ್ ತೆಗೆದುಕೊಂಡೆ, ಏನೂ Use ಆಗ್ಲಿಲ್ವಲ್ಲಾ?

ಎನ್ನುವ ಮುನ್ನ,

1. ಅಂದಿನ ತರಗತಿಗಳನ್ನು ಅಂದೇ Revision ಮಾಡಿದ್ದಿರಾ?
2. ಹಿಂದಿನ ವರ್ಷದ ಪ್ರಶ್ನೆಗಳನ್ನು ಅಧ್ಯಯನ ನಡೆಸಿದ್ದಿರಾ?
3. ವಾರದ ಪರೀಕ್ಷೆಗಳನ್ನು Serous ಆಗಿ ಬರೆದಿದ್ದಿರಾ?
4. ಪ್ರತಿದಿನ ದಿನಪತ್ರಿಕೆ ಓದಿದ್ದಿರಾ?
5. ದಿನನಿತ್ಯದ ಅಧ್ಯಯನ 8 ಗಂಟೆಯಾಗಿತ್ತಾ?
6. ಶಿಕ್ಷಕರು ತಿಳಿಸಿದ್ದ ತಂತ್ರಗಳನ್ನು ಪಾಲಿಸಿದ್ದಿರಾ?
7. ಡೈರಿ ಬರೆದಿದ್ದಿರಾ?

ಎಂದು ನಿಮ್ಮ ಆತ್ಮ ಸಾಕ್ಷಿಗೆ ಸವಾಲೆಸೆಯಿರಿ.

2012 ರಿಂದ 2014 ರ ವರೆಗೆ ನಾ ಕಲಿತ PUC ಶಾಲೆಯಲ್ಲಿ ದೇವರಂತಹ ಶಿಕ್ಷಕರು ನಮಗೆ ದೊರೆತಿದ್ದರು.

ಅಲ್ಲಿಯವರೆಗೂ ಇಂಗ್ಲಿಷ್ ಸರಿಯಾಗಿ ಬರದ ನಾನು, ಸರಿಯಾದ ಇಂಗ್ಲಿಷ್ ಕಲಿತು,
ಅಂದಂದಿನ ಪಾಠ ಅಂದಂದೆ ಓದುತ್ತ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದೆ.

ನಮ್ಮ ದೌರ್ಭಾಗ್ಯಕ್ಕೊ ಏನೋ,
ಹೈದರಾಬಾದ್ ಕೋಚಿಂಗ್ನಲ್ಲಿ,
ಸರಿಯಾಗಿ ಅರ್ಥವೇ ಆಗಲಿಲ್ಲ,

ಆಗ ಕನ್ನಡದಲ್ಲಿ ಹೇಳುವವರೂ ಇರಲಿಲ್ಲ!

ಇನ್ನು online source ನೋಡುವ ನಡುವೆ. ಆರೋಗ್ಯವೊಂದು ಹಠಹಿಡಿದಂತೆ ಪೀಡಿಸಿತು.

ಹೀಗಾಗಿ,
ತಯಾರಿಯಿಂದ ಒಂದ್ ಹೆಜ್ಜೆ ಇಟ್ಟು,

ತರಬೇತಿ ನೀಡುವುದರ ಕಡೆಗೆ Focus ಮಾಡಬೇಕಾಯಿತು!

Actually ನನ್ನ ಆರೋಗ್ಯ ಸುಧಾರಣೆಯಾಗಿದ್ದೇ ತರಬೇತಿ ಕೊಡಲು ಆರಂಭಿಸಿದ ನಂತರ.

So,
ನೀವು Systematic ಆಗಿ,
1 ರಿಂದ 2 ವರ್ಷ UPSC ಗೆ ಕೊಟ್ಟರೆ ಸಾಕು ಇಲ್ಲಿಂದ ಮುಂದಿನ ಹಂತಕ್ಕೆ ಹೋಗಬಹುದು.

ಅದರ ಬಗ್ಗೆ ನಾನು ಈಗಾಗಲೇ ಬಹಳಬಾರಿ ಹೇಳಿದ್ದೇನೆ.

Static ನಲ್ಲಿ
1. Polity
2. Economy
3. Environment
4. Geography
5. Science and technology
6. Modern History
7. Art and culture
8 CSAT

ಇವುಗಳ ಮೇಲೆ ಸಂಪೂರ್ಣ ಹಿಡಿತ.
With Short notes.
(Panchajanya IAS ನಲ್ಲಿ ಎಲ್ಲಾ Notes ನಾವೇ ಕೊಡುತ್ತೇವೆ)

ಇನ್ನು
Current affairs ಗೆ ನಾವೇ ಮಾಡುವ Vision Magazine analysis +ನಿಮ್ಮ Self Reading.

ಹಾಗೆಯೆ,
ದಿನಪತ್ರಿಕೆ
1. ಪ್ರಜಾವಾಣಿ.
2. The Hindu

ಇಷ್ಟೇ….

Mains Mains ಎಂದು ತಮಟೆ ಹೊಡಿಯುವ ಮುನ್ನ ಒಬ್ಬ ಸೀನಿಯರ್ ಆಕಾಂಕ್ಷಿಯಾಗಿ ಹೇಳ್ತೀನಿ,
Everything will be covered in Vision Analysis only!

ಹೆಚ್ಚಿನ ಓದಿಗೆ 2 ತಿಂಗಳು ಸಾಕು!

ಇದೆಲ್ಲದರ ನಂತರ Optional.
ಅಲ್ಲಿಯವರೆಗೂ ಅದರ ಕಡೆ ತಲೆಯೂ ಹಾಕೋಹಾಗಿಲ್ಲ.

ಇನ್ನು Interview ಗೆ?

ಇಷ್ಟೆಲ್ಲಾ ಓದಿದ ನಿಮಗೆ Knowledge ಬರೋದಿಲ್ವಾ?

ಅರ್ಥ ಆಗಿದ್ರೆ,
ದಯವಿಟ್ಟು ಶಿಸ್ತು ಬದ್ಧವಾಗಿ,

ನಿಮಗೆ ನೀವೆ,
ಮೊಬೈಲ್ ಕ್ಯಾಮೆರಾದಲ್ಲಿ ‘ತೊಡೆ ತಟ್ಟಿ ಅಥವಾ ಕಾಲರ್ ಏರಿಸಿ’ ಹೇಳಿಕೊಳ್ಳಿ

“yes, ನನ್ನಿಂದ ಸಾಧ್ಯವಿದೆ,
ನಾನು ಪ್ರತಿದಿನ 8 ಗಂಟೆ ಏಕಾಗ್ರನಾಗಿ ಓದುತ್ತೇನೆ.
ಗೆದ್ದೆ ಗೆಲ್ಲುತ್ತೇನೆ.

ನನ್ನ ಪರೀಕ್ಷೆಗೆ ಬೇಕಾದ ಅಂಶಗಳನ್ನೆಲ್ಲಾ
ಅರಿದು ಕುಡಿದುಬಿಡುತ್ತೇನೆ!

ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ!

I’M DANGEROUS! 🔥”

ಇಷ್ಟು ಹೇಳಿ,

ನೀವು Expect ಮಾಡಿರುವ UPSC Rank ಮತ್ತು

Prelims GS 1 AND CSAT ಅಂಕಗಳನ್ನು ಗೋಡೆಗೆ ಬರೆದು ಅಂಟಿಸಿಕೊಂಡು ಓದಿ.

ನಿಮ್ಮಲ್ಲಿ ಅಪಾರ ಶಕ್ತಿ ಇದೆ.

ಒಂದೆರಡು ವರ್ಷ ಕಷ್ಟಪಡಿ,

ಆಮೇಲೆ,
ಹಾಯಾಗಿರಬಹುದು.

Create a SYSTEM.

ಪ್ರತಿ ಬಾರಿ ಮೈಮರೆತಾಗ,

ನಿಮಗೆ ಕೈ ಕೊಟ್ಟ ಹೋದವರನ್ನೋ

ನಿಮ್ಮನ್ನು ಹಂಗಿಸಿದವರನ್ನೋ,

ಅಥವಾ

ನೀವಿಷ್ಟಪಟ್ಟವರನ್ನೋ ನೆನಪು ಮಾಡಿಕೊಳ್ಳಿ!

8hrs!

At Any cost

8Hrs!

God bless you.

Advance Happy New Year! 🔥

ಈ ವರ್ಷ ಪಾಂಚಜನ್ಯ ಐಎಎಸ್ ನಿಂದ ಹಲವು ಫಲಿತಾಂಶಗಳನ್ನು ನಿರೀಕ್ಷೆ ಮಾಡಿದ್ದೇವೆ,

You are our HOPE
You are our War 🐴 HORSES,

Results ತರ್ತೀರಿ ಅಲ್ವಾ?

ಪ್ರವೀಣ ಮ ಮಗದುಮ್ಮ
Reply @ praveenm.pm77@gmail.com

Leave a Reply